ಕನ್ನಡಿ ಕಾಯಕದ ರೇಮವ್ವ ಸಾಮಾನ್ಯ ಜನವರ್ಗದಿಂದ ಬಂದವಳು. ವೀರಶೈವಧರ್ಮದಲ್ಲಿ ಇವಳಿಗಿದ್ದ ನಿಷ್ಠೆ, ಶ್ರದ್ಧೆ, ನೇರ ನಡೆ-ನುಡಿ, ನಿಷ್ಠುರ ಮನೋ ಭಾವ ಅವಳ ವಚನಗಳಲ್ಲಿ ವ್ಯಕ್ತಗೊಂಡಿವೆ. ಕೆಲವೆಡೆ ಈಕೆ ಅಹಂಕಾರಿಗಳ ವರ್ತನೆಯ ವಿಡಂಬನೆ ಮಾಡಿದ್ದಾಳೆ. ಇವಳ ವಚನಗಳ ಅಂಕಿತ "ನಿರಂಗಲಿಂಗ". == ವಚನಗಳ ವೈಶಿಷ್ಟ್ಯ == ಗುರು, ಲಿ<ಗ, ಜಂಗಮ, ಸದಾಚಾರಗಳ ಬಗ್ಗೆ ಅಸೀಮನಿಷ್ಠೆ ಹಾಗೂ ಶಿವಭಕ್ತರಲ್ಲದವರ ಶಿವನಿಷ್ಠೆಯ ಬಗ್ಗೆ ಅನುಮಾನಿಸುವವರನ್ನು ಖಂಡಿಸಿದ್ದಾಳೆ. ಈ ಶರಣೆಯ ವಚನಗಳಲ್ಲಿ ತಾವು ಹಿಡಿದ ಹೊಸಧರ್ಮ, ಆಚರಣೆ, ಅಚಲಶ್ರದ್ಧೆ, ಒಲವು, ಅಭಿಮಾನ, ಅದನ್ನು ಮೀರುವವರ ಬಗ್ಗೆ ಕ್ರೋಧ, ಅಸಹನೆ, ಪ್ರತಿರೋಧಗಳು ತೀಕ್ಷ್ಣವಾಗಿ ಹೊರಹೊಮ್ಮಿವೆ. ಈಕೆಯ ಒಂದೇ ಒಂದು ವಚನ ಲಭ್ಯವಾಗಿದೆ.